ಹಣತೆ
ರಚನೆ : ಸನಿಹ
----------------------------------
ಕತ್ತಲ ಸೂಡಿ ಬೆಳಗು ಕಾಣಲು ಹೊರಟ ಬಗೆಗೆ ಬಿಳಿದಾರದ ಬೆಳಕಿಗೂ ಹೊರಸೂಸಲು ತಾವಿಲ್ಲ. ಬೆಂಕಿ ಬತ್ತಿಗಳು ಸೆಣಸಾಡಿ ಹೆರುವ ಉರಿಗಳಲಿ ಸುಟ್ಟ ಕಪ್ಪಾದ ಕೋಣೆಯಲಿ ಕೈ ಮೇಲಾದವರ ಕುಹಕ ನಗೆ. ದ್ವಾಂತದಿಂದ ದ್ವಾಂತಕ್ಕೆ ಕೈ ಬದಲಿಸಿಕೊಳ್ಳುವ ಆ ತೈಲ ಲೇಪಿತ ಹಣತೆ ಯಾರೋ ಹುಯ್ಲಿಬ್ಬೆಸಿದ ಗಾಳಿಗೆ ನುಚ್ಚುನೂರು. ತುಣುಕುಗಳ ತುಳಿದು ನಿಂತವರ ಎದೆಯಲ್ಲಿ ಇನ್ನೊಂದು ಹಣತೆಯ ಗೀಳು. ಯಾರದೋ ತೃಷೆಗೆ ಗುಟುಕೆಂದು ತಿಳಿಯದೆ ಮಾರುವವನ ಮಾತಿಗೆ ಸಾಲಾಗಿ ನಿಂತಿವೆ. ಕೊಡುಕೊಳ್ಳುವಿಕೆಯ ಧಾವಂತದಲ್ಲಿ ಹಸಿವು ಹಣ ಹಣತೆ.
----------------------------------
ನೋಂದಣಿ ಐಡಿ : KPFS2-6567