ಅಮ್ಮಾ ಎಂಬ ಎರಡಕ್ಷರ
ರಚನೆ : ನಂದಿತಾ ನಾಯ್ಕ್
----------------------------------
ಜೀವವನ್ನೇ ಪಣಕ್ಕಿಟ್ಟು ಜೀವ ನೀಡಿದಳಂತೆ ಮಕ್ಕಳೇ ಜೀವವೆಂದು ಭಾವಿಸಿದಳಂತೆ ಸದಾ ಉದಯಿಸುವ ಸೂರ್ಯನಂತೆ ದುಡಿಯುವಳು ಮನೆಯಲ್ಲಿ ಆಳಿನಂತೆ ಮಿನುಗುವಳು ಸದಾ ನಕ್ಷತ್ರದಂತೆ ನೀಡುವಳು ರಕ್ಷಣೆ ದೇವರಂತೆ ಬಯಸಿಹಳು ತನ್ನಂತಾಗಬಾರದೆಂದು ಅದಕ್ಕಾಗಿ ಶ್ರಮಿಸಿ ಎನ್ನುವಳು ಎಂದೆಂದು ಹೇಳುವಳು ಹುಚ್ಚು ತನ ತೊರೆಯೆಂದು ಇರುವಳು ಜೊತೆ ಮುಂದೆಂದು ಮನಸ್ಸಲ್ಲೇ ನುಂಗುವಳು ಅವಳಾಸೆಯನ್ನು ಬಚ್ಚಿಡುವಳು ಅವಳೆದೆಯ ಭಾವನೆಯನ್ನು ತೋರುವಳು ಪ್ರೀತಿ-ಮಮತೆಯನ್ನು ಪ್ರಪಂಚದಲ್ಲೆಲ್ಲಿರದ ಜೀವ-ನನ್ನಮ್ಮ!
----------------------------------
ನೋಂದಣಿ ಐಡಿ : KPFS2-6565