Submission 2360

ಮಹಾನ್ವಿತೆ!

ರಚನೆ : ರೇಣುಕಾ ನಂದಿಕೊಪ್ಪ

----------------------------------

ಕಾರ್ಮೋಡದಂಚಿನ ಅವತರಿಕೆಯ ಶಿಲ್ಪ ನೀನು, ಬಿಳಿಮೊಲಕೆ ಮುದ ನೀಡವ ಕಿರು ಕಣ್ಣಿನ ಕಲ್ಪನೆ ನೀನು, ಸಿಂಹಿಣಿಯಕೇಸರಿಗೆ ಕಪ್ಪ ಬಳಿದ ಕೇಶವಿನ್ಯಾಸಿನಿ ನೀನು, ಕಾನನದ ಸಂಪಿಗೆಯೇ ನಾಚುವ ಮೂಗಿನವಳು ನೀನು, ಕೆಂದಾವರಿಗೆ ಅಸೂಯೆ ಹುಟ್ಟಿಸುವ ನಗೆಯವಳು ನೀನು, ನಿನ್ನ ನುಣುಪಾದ ಪಾದವೋ ಹಿಮಾಲಯದ ತಪ್ಪಲಂತಿದೆ, ನಯವಾದ ಹೆಜ್ಜೆಗಳೋ ಮೀನಿನ ಸಪ್ಪಳವನ್ನು ನಾಚಿಸುವಂತಿದೆ, ಮಾತಿನ ಲಹರಿಯೋ ಹೆಜ್ಜೇನ ಹಾಡಿಗೆ ಸ್ವರ ನೀಡಿದಂತಿದೆ, ನಿನ್ನ‌ಮಡಿಲೋ ಸ್ವರ್ಗದ ಸುಪ್ಪತ್ತಿಗೆಯನ್ನೂ ಮೀರಿಸುವಂತಿದೆ, ನಿನ್ನ ಕೈತುತ್ತೋ ಸಮಸ್ತಲೋಕಗಳ ಮಹಾಮನ್ನವನ್ನು ತಳ್ಳಿಬಿಡುವಂತಿದೆ, ಹಡೆದು-ಬೆಳೆಸಿ,ಬಡಿದು-ಬಗ್ಗಿಸಿ, ಉಣಲು-ತೊಡಲು ಕಲಿಸಿ,ವಿದ್ಯೆ-ಬುದ್ದಿ ಕೈಲಿರಿಸಿ, ಸರಳತೆಯ ಪಾಠ ತಿಳಿಸಿ,ಗೆದ್ದಾಗ ಬಣ್ಣಿಸಿ,ಸೋತಾಗ ಸಂತೈಸಿ, ಪ್ರೀತಿಮಮತೆ ಸಮೃದ್ಧ ಶಿಖರವಾಗಿ, ಸದಾ ಅವಳ ಋಣದಲ್ಲಿರುವಂತೆ ಮಾಡಿದವಳೇ!! ನನ್ನವ್ವ.!!

----------------------------------

ನೋಂದಣಿ ಐಡಿ : KPFS2-6563

41
Votes
263
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top