ಪುಟಾಣಿಗಳು
ರಚನೆ : ರಂಜಿತ ಎಮ್
----------------------------------
ತಂಗಾಳಿಯ ತಿದ್ದಿತೀಡಿದ ಕಣ್ಮಣಿಗಳು ಕೆಂಜೆಂಡು ತಮಸೀಳಿಬಂದವರು ಅಂಬರದ ರವಿಯಂತೆ ಪ್ರಜ್ವಲಿಪ ಪುಟಾಣಿಗಳು ಪಾದರಸದಂತೆ ಪುಟ್ಟಿದೆಳುವ ಕಣ್ಮಣಿಗಳು ಅಗಾಧ ಶಕ್ತಿ ಸಾಮರ್ಥ್ಯವುಳ್ಳ ಸಾಹಸಿಗಳಿವರು ತರ್ಲೆ ತುಂಟಾಟದಿ ನಲಿಯುತ್ತ ಕಲಿವ ಕಲಿಗಳಿವರು ನಿಷ್ಕಲ್ಮಶ ಮನದ ಮುದ್ದು ಪುಟಾಣಿಗಳು ತೊದಲು ನುಡಿಯ ಮೃದಂಗ ಧ್ವನಿಯ ಕಣ್ಮಣಿಗಳು ಕಾರ್ ಮೋಡಗಳ ಹಿಮ್ಮೆಟ್ಟುವರು ಕಡಲ ಅಲೆಗಳಜೊತೆ ಸೆಣಸಾಡುವರು ಪುಟ್ಟಕ್ಕಿಟ್ಟ ಚಿನ್ನ ಎನ್ನ ಮುದ್ದು ಪುಟಾಣಿಗಳು ನನ್ನ ಪ್ರಪಂಚವೇ ನೀವಾಗಿರುವ ಕಣ್ಮಣಿಗಳು ನಕ್ಕುನಲಿಸಿ ಸಿಹಿಗನಸಾಗಿರುವ ಕಲೆಗಾರರು ಭವ್ಯ ಭಾರತದ ಭವಿಷ್ಯದ ಪುಟಾಣಿಗಳು
----------------------------------
ನೋಂದಣಿ ಐಡಿ : KPFS2-6537