Submission 2316

ಮೋಹದೊಳು ಛಂದಸ್ಸು

ರಚನೆ : ಗಿರಿಜೇಶ್. ಕೆ ಪಾಳ್ಯ

----------------------------------

ಗೆಳತಿಯೇ ನನ ಭಾವನೆಯ ಕಂದದೊಳು ವಿವರಿಸಲೇ, ಇಲ್ಲ ರಗಳೆ ಸಾಂಗತ್ಯದೊಳು ವಿವರಿಸಲೇ ನಾನರಿಯೆ, ವಿವರಿಸುವ ನನ ಭಾವನೆಯ ಕಿವಿಗೊಟ್ಟು ಕೇಳು ಸಾಕು ವರ್ಣಮಾಲೆಯ ವರ್ಣಿಸಿದ ಕೇಶೀರಾಜನಂತೆ ನಿನ್ನಂದವ ವರ್ಣಿಸಲು ನಾನಿರುವೆ, ಕನ್ನಡದ ಆದಿಯದು ಎಷ್ಟು ಪ್ರಾಚೀನವೊ, ಅಷ್ಟೂ ನಾ ನಿನ್ನ ಪ್ರೀತಿಸುವೆ ಹೌದೆನ್ನು ಸಾಕು ನಿನ ಕೈ ಪಿಡಿದು ನಾ ನಡೆಸುವಾಸೆ ಸ್ವರದೊಳು ವ್ಯಂಜನ ಬೆರೆವ ಹಾಗೇ ನಿನ ಕೆಂದುಟಿಗೆ ವರ್ಣವನು ಲೇಪಿಸುವ ಆಸೆ ಚರಣಕೆ ಮೆರುಗು ನೀಡುವ ಹಾಗೇ ಮುಡಿಗೆ ಮಲ್ಲಿಗೆಯ ಮುಡಿಸಿ ಆರಾಧಿಸುವೆ ಭುವನೇಶ್ವರಿಯ ಆರಾಧಿಸುವ ಹಾಗೇ

----------------------------------

ನೋಂದಣಿ ಐಡಿ : KPFS2-6535

4
Votes
115
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top