Submission 2314

ಎಲ್ಲಿಗೆ ಪಯಣ?

ರಚನೆ : ಪ್ರಾರ್ಥನಾ ಎಂ ಆರ್

----------------------------------

ಬಲ್ಲವರಾರು ಮುಂದಿನ ನಿಲ್ದಾಣ? ಬಯಸದೆ ಇರುವವರಾರು ಕುರುಡು ಕಾಂಚಣ? ತೀರಿಸುವವರಾರು ತಾಯಿಯ ಋಣ? ಸೋಲುವರಾರು ತೊಟ್ಟಾಗ ಗೆಲ್ಲುವ ಪಣ? ಮನುಗಿನ್ನ ನೊಣ ಲೇಸು ಮಾಡದು ಕಾಲ ಹರಣ ಮೌನಿ ಯಾಗುವುದೊಳಿತು ತಿಳಿದಾಗ ಮನದ ಹಗರಣ ಮುರಿಯುವವರಾರು ಕರ್ಣನ ಭದ್ರ ಪ್ರಮಾಣ? ಏಕೆಂದರೆ ಸ್ಮರಣಾ ಶಕ್ತಿಗೆ ನಿಲುಕದ್ದು ಆತನ ಗುಣ ಶಾಶ್ವತ ಒಂದೇ ಸೂರ್ಯನ ನಿಷ್ಕಲ್ಮಶ ಕಿರಣ ಆದರೂ ತಿಳಿದವರಾರು ತಿಳಿಸುವವರಾರು ಎಲ್ಲಿ ಸೇರುವುದು ಹೊರಟು ನಿಂತ ಪಯಣ?"

----------------------------------

ನೋಂದಣಿ ಐಡಿ : KPFS2-6534

21
Votes
260
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top