ಪ್ರಸ್ತುತ
ರಚನೆ : ಗೋಪಾಲ ಕೃಷ್ಣ ಹೆಚ್
----------------------------------
ಯಾರನ್ನು ಮುದ್ದಿಸಲಿ ತೆರೆದ ಸ್ಮಶಾನದಲ್ಲಿ ಕೂತು, ಮಡಿದ ನೆನ್ನೆಗಳನ್ನೋ? ಹುಟ್ಟಲಿರುವ ನಾಳೆಗಳನ್ನೋ? ಅಥವಾ ಕೊನೆಯುಸಿರೆಳೆವ ಇಂದಿನ ಕ್ಷಣಗಳನ್ನೋ. ಇಲ್ಲೆ ಇರೆನ್ನ ಏಕಾಂತವೆ ಮುಗಿಯದ ಮಾತಿದೆ ಮೌನವೇ ನೀನೇಕೆ ಹೊರಡುವೆ ? ನಿನ್ನ ಪಾಳಿ ಇನ್ನೂ ಮುಗಿಯದಿದೆ. ಇತಿಮಿತಿಯೇ ಎಲ್ಲೆಲ್ಲಿಯೋ ಅಲೆಯದೆ ನಿರಾಳದಿ ನಿಲ್ಲು ಇನ್ನೂ ಪಯಣವಿದೆ, ನಗುವೇ ನೀ ಹಿಂಬಾಲಿಸಿಬಾರದಿರು ನಿನ್ನವಶ್ಯಕತೆ ಏನೆಂದು ತಿಳಿಯದಾಗಿದೆ. ಅಳುವೆ ನೀ ಸರಿಯಾಗಿ ತಿಳಿಯೆ ಮನದ ತಲ್ಲಣ, ನೋವಿನೂರಣ, ಸ್ವಚ್ಛಗೊಳಿಸುವ ಭರದಿ ಹೊರಗೆಸೆದಿರುವೆ ಎಲ್ಲರೆದುರಿಗೆ ನನ್ನನ್ನೇ!
----------------------------------
ನೋಂದಣಿ ಐಡಿ : KPFS2-6533