ಭೂಮಾತೆಗೆ ನಮನ
ರಚನೆ : ಎಸ್. ಸಂಧ್ಯಾರಾಣಿ
----------------------------------
ಸುಂದರ ಭೂಮಿಗೆ, ಸವಿ ಸವಿ ಕನಸು, ಸಿಹಿ ಸಿಹಿ ಮನಸು. ಜಗದ ಸೃಷ್ಟಿಯಲಿ ಸೌಹಾರ್ದದ ಸೊಬಗು. ಆಗಸದ ದಿವ್ಯತೆಯೊಳು ಅರಳುವ ಚಿತ್ತಾರ, ಸೂರ್ಯ ಚಂದ್ರಮರು, ಫಳ ಫಳ ಹೊಳೆಯುವ ಮಿನುಗು ತಾರೆಗಳು. ಭುವಿಯ ಚೈತನ್ಯದಿ ಚಿಗುರುವ, ಗಿಡ ಮರ ಬಳ್ಳಿಗಳು. ಮುದದಿ ಹರಿಯುವ ನದಿ ತೊರೆ ಝರಿಗಳು, ಸಾಗರದಿ ಒಂದಾಗುವ ನೀರಿನ ಸೆಲೆಗಳು. ಜೀವರಾಶಿಗಳ ಸಡಗರ ಸಂಭ್ರಮ, ಕೂಡಿ ನಲಿಯುವ ಸುಮಧುರ ಸಂಗಮ. ನಿರ್ಮಲ ಬದುಕಿಗಿರಲಿ ನಮ್ಮ ಪಾವನ ಸಂಕಲ್ಪ, ಭೂದೇವಿಗೆ ಎತ್ತುವ ನಾವು ಒಲವಿನ ಆರತಿ ನಿರಂತರ.
----------------------------------
ನೋಂದಣಿ ಐಡಿ : KPFS2-6532