ನನ್ನೊಳಗಿನ ನಾನು
ರಚನೆ : ಪ್ರದೀಪ ಮಲ್ಲಿಕಾರ್ಜುನಯ್ಯ
----------------------------------
ಎಲ್ಲರನು ಕಳೆದುಕೊಂಡು ಏಕಾಂಗಿಯಾದಾಗ ಇಷ್ಟಪಡುವವರ ಪ್ರೀತಿ ಕೃತಕವೆನಿಸಿದಾಗ!! ಜೊತೆಗಿರುವೆ ಎಂದವರೇ ದೂರವಾದಾಗ ಸೂಕ್ಷ್ಮ ಮನಸು ಖಿನ್ನತೆಗೆ ಒಳಗಾದಾಗ!! ಸುತ್ತಲೂ ಕಗ್ಗತ್ತಲು ಆವರಿಸಿಕೊಂಡಾಗ ಕಷ್ಟಗಳಿಗೆ ಧೈರ್ಯವೇ ಸೋತು ಕಂಗಾಲಾದಾಗ!! ಜೀವನವೇ ಸಾಕೆಂದು ಸಾವನು ನಿರೀಕ್ಷಿಸುವಾಗ ಭರವಸೆಯ ದೇವರೇ ಇಲ್ಲವೆನಿಸಿದಾಗ!! ದೀವದ ಬೆಳಕಂತೆ ಕಂಡವಳು ನೀನು ಸಮಯಕ್ಕೆ ಸಮಯಕೊಟ್ಟು ಕಾದವಳು ನೀನು!! ಕಠಿಣ ಆಧ್ಯಾತ್ಮವನು ಸರಳಗೊಳಿಸಿದವಳು ನೀನು ನೀನು ಬೇರೆ ಇನ್ಯಾರೋ ಅಲ್ಲ, ನನ್ನೊಳಗಿನ ನಾನು!!
----------------------------------
ನೋಂದಣಿ ಐಡಿ : KPFS2-6366