Submission 2052

ಅಪರಿಚಿತ

ರಚನೆ : ಮಾಲಾಶ್ರೀ ಮಾಳ್ಯಾಗೋಳ

----------------------------------

ಕನಸ್ಸಿನಲ್ಲಿ ಬರದವನು ಮನಸ್ಸಿನಲ್ಲಿ ಮನೆಮಾಡಿರುವನು ಕಣ್ಣಲ್ಲೆ ಪ್ರೀತಿಯ ಹೇಳುವನು ‌ಕಣ್ಮುಂದೆ ಬಂದರೆ ಆ ಪ್ರೀತಿಯ ಮರೆಮಾಚಿ ಬೀಡುವನು ಮೂರು ಸಾಲಿನಲ್ಲಿ ವರ್ಣಿಸಲು ತ್ರಿಪದಿಯೇ ನಾಚುವುದು ಅವನ ಗುಣಕ್ಕೆ ನಾಲ್ಕು ಸಾಲಿನಲ್ಲಿ ವರ್ಣಿಸಲು ಕಂದವೇ ಕಳೆದು ಹೋಗುವುದು ಅವನ ಅಂದಕ್ಕೆ ಆರು ಸಾಲಿನಲ್ಲಿ ವರ್ಣಿಸಲು ಷಟ್ಪದಿಯೇ ಸಾಲ ಕೇಳುವುದು ಅವನ ಚಾತುರ್ಯಕ್ಕೆ ನೂರು ಸಾಲಿನಲ್ಲಿ ವರ್ಣಿಸಲು ಶತಕವೇ ಶರಣಾಗುವುದು ಅವನ ಮನಕ್ಕೆ ಪ್ರತಿಯೊಂದರಲ್ಲಿಯೂ ನನ್ನನ್ನೆ ಹೋಲುವ ಗುಣದವನು ಆದರೂ ಅವನು ಅಪರಿಚಿತನು

----------------------------------

ನೋಂದಣಿ ಐಡಿ : KPFS2-6363

1
Votes
100
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top