Submission 2050

ಅವಳೆನ್ನ ಒಲವು

ರಚನೆ : ಶ್ರೀನಿವಾಸ.ಜಿ

----------------------------------

ಪ್ರೇಮ ಪರಿಧಿಯ ವ್ಯಾಖ್ಯಾನದಿ ಬರೆಯುವೆ ಆನಂದದಿ ಸಂತಸ ಚಿತ್ತಾರದಿ ಕದವ ತಟ್ಟಿ ಒಲವ ಓಲಗದಿ ಬಂದಾಕೆ ಭಾವ ಧಾರಣೆಯ ತೋರಣವ ಕಟ್ಟಿ ಹಂಬಲದ ಬೆಳಕ ತೋರಿದಾಕೆ ಚೆಂದದ ಚೆನ್ನುಡಿಯೊಳು ಹಾಡುತಿಹಳು ಸಂಗೀತದ ಸಂಗತಿಯಾಗಿ ಮನಮೋಹಕ ಮಾತಿನೊಡನೆ ಬಂದಿಹಳು ಸಾಂಗತ್ಯದ ಸಂಗಾತಿಯಾಗಿ ಪರಿಣಯಕೆ ಪರಿಚಯಿಸಿ. ದೊರೆತ ಸಂಭ್ರಮ ಅವಳು ಅನುಗಾಲಕೆ ಅನುರಾಗದಿ ಬೆರೆತ ಪ್ರೇಮಿ ನನ್ನವಳು!

----------------------------------

ನೋಂದಣಿ ಐಡಿ : KPFS2-6361

15
Votes
152
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top