ಇದು ಕನ್ನಡ
ರಚನೆ : ಮಾರುತಿ ಟಣಕನಕಲ್
----------------------------------
ಇದು ಕರುನಾಡು ಇದು ನಮ್ಮ ಹೆಮ್ಮೆಯ ಕನ್ನಡ ನಾಡು! ಬದುಕಲು ಹಲವಾರು ಭಾಷೆ ನಾಡಿನಲ್ಲಿ ಇಟ್ಟೆ! ಮಾತನಾಡಲು ಅದ್ಭುತ ಭಾಷೆ ಕೊಟ್ಟೆ! ದೇಶಪ್ರೇಮವನ್ನೇ ನಾಡಗೀತೆಯಲ್ಲಿ ಮೆರೆಸಿಬಿಟ್ಟೆ ಭಾಷೆ ಪ್ರೇಮವನ್ನು ಕವಿಗಳ ಮೂಲಕ ತೋರಿಸಿ ಬಿಟ್ಟೆ! ಕನ್ನಡವನ್ನ ಹೃದಯದಿಂದ ಕಲಿಸಿಕೊಟ್ಟೆ ಬೇರೆ ಭಾಷೆಯ ಮೇಲೆ ವ್ಯಾಮೋಹ ಕಡಿಮೆ ಮಾಡಿಬಿಟ್ಟೆ! ನಾಡಿನಲ್ಲಿ ಚಿನ್ನವನ್ನು ಇಟ್ಟೆ ದೇಶದ ತುಂಬಾ ಶ್ರೀಗಂಧ ಪಸರಿ ಬಿಟ್ಟೆ ! ಕನ್ನಡಕ್ಕೆ ಕನ್ನಡವೇ ಸರಿಸಾಟಿ ಕಪ್ಪು ಮಣ್ಣಿಗೆ ಕರುನಾಡೇ ಸಾಟಿ.
----------------------------------
ನೋಂದಣಿ ಐಡಿ : KPFS2-6345