Submission 1715

ಭಾರವಾಗದಿರು

ರಚನೆ : ಕಾವೇರಿ ಹೂಗರ್

----------------------------------

ಭಾರವಾಗದಿರು ಮನವೇ ಭಾರವಾಗದಿರು.. ಎಂದಿಗೂ ಯಾರಿಗೂ ನೀ ಭಾರವಾಗದಿರು, ಕಂಡು ಕಾಣದಿರು ಕಾಣದ್ದು ಕಂಡಂತಿರು, ನಿನಗೆಂದು ನೀ ಭಾರವಾಗದಿರು ಮತ್ತೊಬ್ಬರ ನೋವಿಗೆ ಕಾರಣವಾಗದಿರು, ಕರುಣೆ ತೋರುವರೆಂದು ಕೈ ಜಾರದಿರು ತೋರುವ ನೆಪದಲ್ಲಿ ಬಿಳಿಸುವವರು ಅವರೇ ಎಂದು ನೀ ಮರೆಯದಿರು, ಅಳದಿರು ನೀ ಬಳಲದಿರು ಯಾರಿಗೂ ನಿನ್ನ ಕಷ್ಟವ ಹೇಳದಿರು, ಮಾಯಾಲೋಕವಿದೆಂದು ನೀ ಮರುಗದಿರು ಮಾಯೆಯಲ್ಲಿಯೇ ಮೇಧಾವಿಗಳಿರುವವರೆಂದು ನೀ ತಿಳಿದಿರು, ಕಣ್ಣು ಮಂಜಾಯಿತೆಂದು ನೀ ಕೊರಗದಿರು ಪೊರೆಬಿಡಿಸಿಕೊಳ್ಳುವ ಬಗೆ ನೀ ಅರಿತಿರು. ಬಯಸದಿರು ನೀನೇನು ಬಯಕೆಗೂ ಭಾರವಾಗದೇನು? ಬದುಕೊಂದು ಬಂಡಿ ತುಂಬದೆಂದು ಅದರ ಹುಂಡಿ! ಜೀವನಸಾರ

----------------------------------

ನೋಂದಣಿ ಐಡಿ : KPFS2-6176

32
Votes
279
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top