ಕನಸ ಕಂಡೆನ್
ರಚನೆ : ಶಕಿ.ಶಕುಂತಲ
----------------------------------
ಕನಸ ಕಂಡೆನ ಅವರ ಇವರ ತಿಳಾದವರ ನಡುವ ಕನ್ನಡ ಕಂಡೆನ ಹೃದಯ ದಮಣಿ ಒಳಗ ಗಂಧದ ಅಮಲ ಚೆಲ್ಲೇನ. ಕುದುರಿ ಹಾರ್ಯಾಡಿದಂಗ ಹಾರಿ ಹವ್ವರೇನ..!! ಮನದ ಸುಖ ಹೆಂಗೆ ತೋರಣ ನನ್ನ ರಾಣಿ ಗುತ್ತು ಗುರಿ ಇಲ್ಲದ ಜಾಲದಾಗ ಕನ್ನಡ ಕಂಡೆನ. ಕನಸ ಕಂಡೆನ ನರ ಪೊಕರ ಉಂಡ ಮನೆಗೆ ಧಕ್ಕ ಕೊಟ್ಟಿದ್ದ ನೋಡೇನ . ಮಾತ ಬಂದ್ರು ಗೊತ್ತಿಲ್ಲ ಎಂದ ಜಗಮಿಂಡಿಗಳ ಶಾಪ ಬೀರೇನ.!! ಬಿಗಿ ಬಂದೋಬಸ್ತ್ ಧಾಗ ತೇಲೊ ಮಂದಿ ನಡಾ ಮುರದ ಕನ್ನಡ ಕಲಿಸಿನ. ಹಣೆಬರಹ ಅಳಿಸಿ ಕಳಸಿ ಕುಕ್ಕರಸಿ ಹೇಳೇನೆ ಕನಸ ಕಂಡೆನ.. ಕನ್ನಡ ಕಂಡೆನ... ಒಗ್ಗಟ್ಟಿಲ್ಲದ ಜಾತ್ರಿ ಕುರುಹಿಂಡಿನ ಯಾತ್ರಿ ಅನ್ನೋ ಅಣ್ಣತಮ್ಮರ ನಡುವ ಬಿದ್ದು ಬಿದ್ದು ನಕ್ಕೇನ.. ಬೆಳಗಾವಿ ಮೈಸೂರ್ ಬೆಂಗಳೂರ ಮಂಗಳೂರು ತೋರ್ಸಿ ನಿದ್ದಿ ಹಾರಿಸೇನ.. ಪುಣ್ಯದ ಮಳಿಗೆ ಕರುನಾಡ ಬೆಳಿಗೆ ಸರಸ ಆದದ್ದ ಕಂಡೆನ್.. ಹಸಿರ ಸಿರಿಗೆ ನಾ ಶರಣದದ್ದ ಅನುಭವುಸೇನ.. ಕನಸ ಕಂಡೆ ಕಾಣದ್ದ ಕಂಡೆನ ಕಾಣಲಾರದ್ದ ಕಂಡೆನಾ ಕನ್ನಡ ಕಂಡೆನ ..!!!
----------------------------------
ನೋಂದಣಿ ಐಡಿ : KPFS2-6174