ಕಾಯುತ್ತ ಕುಳಿತ ಜೀವ ನಾನು
ರಚನೆ : ಅಭಿಲಾಷ್ ನಿಜಗುಣಿ ಯಲಲ್ಲಿ
----------------------------------
ತೇವವಿಲ್ಲದ ಮಣ್ಣಿನ ಒಳಗೆ, ಜೀವವಿಲ್ಲದ ಉಸುಬಿನ ಒಳಗೆ ಬಿತ್ತಿದ ಬೀಜ ಹುಟ್ಟುವುದೆಂದು ಕಾಯುತ್ತ ಕುಳಿತ ಜೀವ ನಾನು...!! ಎಣ್ಣೆ ಇಲ್ಲದ ದೀಪದ ಒಳಗೆ, ಕಟ್ಟಿಗೆ ಇಲ್ಲದ ಒಲೆಯ ಒಳಗೆ ಹಚ್ಚಿದ ಬೆಂಕಿ ಬೆಳಗುವುದೆಂದು ಕಾಯುತ್ತ ಕುಳಿತ ಜೀವ ನಾನು...!! ರಾಶಿ ಇಲ್ಲದ ಹಗೆಯ ಒಳಗೆ, ಬತ್ತಿ ಹೋದ ಬಾವಿಯ ಒಳಗೆ ಬಿಟ್ಟ ಕೊಡವು ತುಂಬುವುದೆಂದು ಕಾಯುತ್ತ ಕುಳಿತ ಜೀವ ನಾನು...!!
----------------------------------
ನೋಂದಣಿ ಐಡಿ : KPFS2-6168