ಮದುವೆಯಲ್ಲ ಮಸಣ
ರಚನೆ : ಚರಣ್ ಎಸ್ ಜೆ
----------------------------------
ಆಗಷ್ಟೆ ರವಿಯ ಚುಂಬನಕೆ ಅರಳಿದ ಮೊಗ್ಗೊಂದು ಮದುವೆ ಎಂಬ ಮಂದಿರದಿ ಪತಿ ಎಂಬ ಮೂರುತಿಯ ಮುಡಿಗೇರುವ ಕನಸ ಹೊತ್ತು ತವಕದಿ ಕಾಯುತ್ತಿತ್ತು. ಅದೇ ಮಂದಿರವ ಪೊಕ್ಕಿ ಬಾಡಿದ ಹೂವೊಂದು ಕೂಗಿ ಹೇಳಿತು, ಕಾಣದೆ ಮರೆಯಲ್ಲೇ ಇದ್ದುಬಿಡು ಮರುಳೆ, ಮಂದಿರವಲ್ಲ ಮಸಣವದು ನಮ್ಮ ಪಾಲಿಗೆ. ಮುಡಿಗೇರುವ ಭರದಲ್ಲಿ ಘಮಿಸುವ ಸ್ವಾತಂತ್ರ್ಯವನ್ನೇ ಕಳೆದುಕೊಳ್ಳುವೆ, ಅವನ ವಜ್ರಾಭರಣದ ಮುಂದೆ ನಿನ್ನ ಕಾಂತಿಯನ್ನೆ ಕಳೆದುಕೊಳ್ಳುವೆ, ಆ ಮೂರುತಿಗೆ ಪ್ರೀತಳಾಗಲು ಹೋಗಿ ಕೊನೆಗೆ ನಿನ್ನನ್ನೇ ನೀನು ಕಳೆದುಕೊಳ್ಳುವೆ.
----------------------------------
ನೋಂದಣಿ ಐಡಿ : KPFS2-6169