Submission 1699

ಕನಸಲಿ ಕಂಡ ಕನ್ನಡ

ರಚನೆ : ನಸುನಗೆಯ ನಾವಿಕ

----------------------------------

ಕಂಡ ಕನಸಿನಲೂ ಕಾಡುತ್ತಿದೆ ಕನ್ನಡ ಕಾಣದೂರಿಗೆ ಕರೆದೊಯ್ಯುತ್ತಿದೆ ಕನ್ನಡ|| ಕವಿಯ ಕೋಮಲದ ಕೈಗಳಲ್ಲಿ ಕುಣಿದಾಡುತ್ತಿದೆ ಕನ್ನಡ ಕತ್ತಲೆಯ ಕನವರದಿ ಕಾಣುತ್ತಿದೆ ಕನ್ನಡ ಕರುಳಿನ ಕಲ್ಮನಸಿಗೂ ಕರಗುತ್ತಿದೆ ಕನ್ನಡ ಕನ್ನಡವಕ್ಕಿಯ ಕಲರವದಿ ಕಂಪಿಸುತ್ತಿದೆ ಕನ್ನಡ(1) ಕಾಣದ ಕಡಲಿನೊಳು ಕದಿರುತ್ತಿದೆ ಕನ್ನಡ ಕಂಬುಕಂಠದಿ ಕಹಳೆಯೂದುತ್ತಿದೆ ಕನ್ನಡ ಕಂಜರೀಟದಾಗೆ ಕೂಗುತ್ತಿರೆ ಕನ್ನಡ ಕಕ್ಕಡಾರತಿಯಂತೆ ಕಂಗೊಳಿಸುತ್ತಿದೆ ಕನ್ನಡ (2)

----------------------------------

ನೋಂದಣಿ ಐಡಿ : KPFS2-6167

26
Votes
221
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top