ಆಸ್ತಿಕನ ನಿಜಾಸಕ್ತಿಗಳು ಹೀಗೂ ಇರಬಹುದೇ?
ರಚನೆ : ಚಂದ್ರಶೇಖರ ಎಸ್ ಆರ್
----------------------------------
ಕೋಟಿ ವೆಚ್ಚವ ಭರಿಸಿ ಗುಡಿಯೊಂದನು ಕಟ್ಟಿಸಿ ಅದರೊಳಗೆ ಪ್ರಕೃತಿಯ ತುಣುಕೊಂದನು ನೆಲೆಸಿ ಕೈ ಮುಗಿದು ನಿಂತೆಯ ಮನವೆ ಸ್ವಲ್ಪ ಹೊತ್ತಿನ ಭಕ್ತಿಯ ಧರಿಸಿ. ಗಂಡು-ಹೆಣ್ಣಿನ ಮಿಲನದಿ ಜನಿಸಿ ಹಲವು ಬಗೆಯ ಜಾತಿ ನಿರ್ಮಿಸಿ ಜಾತಿಗೊಂದು ದೇವರ ಕಲ್ಪಿಸಿ ಮೌಢ್ಯತೆಯ ಉಣಬಡಿಸುವ ಮನವೆ ನೀ ಎಷ್ಟು ? ಸಾಹಸಿ. ಎಲ್ಲಾ ದುರ್ಗುಣಗಳನ್ನು ತನ್ನೊಳಗೆ ಅಡಗಿಸಿ ಸಭ್ಯನಂತೆ ಬಹಿರಂಗದಿ ನಟಿಸಿ ಸ್ವಾರ್ಥಕಿಚ್ಚಿನೊಳು ಮಾನವೀಯತೆಯನ್ನು ದಹಿಸಿ ಸಾಹುಕಾರತೆಗಾಗಿ ಸಾರ್ಥಕತೆಯನ್ನೇ ಮರೆತ ಮನವೆ ನೀ ಎಷ್ಟು? ಆಲಸಿ.
----------------------------------
ನೋಂದಣಿ ಐಡಿ : KPFS2-6149