ಅನ್ನದಾತ
ರಚನೆ : ಚಿಂತ್ರಪಳ್ಳಿ ಕೊಟ್ರೇಶ
----------------------------------
ಜಿನುಗುಡುತಿದೆ ಮಳೆ ದಿನವಿಡಿ ಜಿಟಿಜಿಟಿ ಲೆಕ್ಕಿಸದೆ ದುಡಿಯುತಿಹರು ಭೂತಾಯಿ ಮಡಿಲಲಿ ಹೊದಿದಿಹರು ತಲೆಮೇಲೆ ನಾರಿನ ಚೀಲವನು ತೊಡಗಿಹರು ಹೆಂಗಸರು ಸಲ್ಲದ ಕಳೆ ಕೀಳಲು ತೊಡಗಿಹರು ಗಂಡಸರು ಕುಳಿತಮಣ್ಣಿನ ತಲೆಕೆದರಲು ಹೊಂದಿಹರು ಲಾಭವನೇ ಬಯಸದ ಮನಸುಗಳನು ಕೊರಗದಿಹರು ತಮಗಾದ ನಷ್ಟದ ಪರಿಯನೆನೆದು ನಂಬುಗೆ ಹೊಂದಿಹರು ಮತ್ತೆ ವಸಂತ ಮರಳುಹುದೆಂದು ಎಂದೂ ಬಿಡರು ತಮ್ಮೀ ಕಾಯಕವ ಸೋತೆವೆಂದು ಇದು ಕೇವಲ ಅವರವರ ಹಿತಕಲ್ಲ ಹಲವು ಜೀವಸಂಕುಲಗಳ ಸಲಹುದಕ್ಕಾಗಿ...
----------------------------------
ನೋಂದಣಿ ಐಡಿ : KPFS2-6091