Submission 1553

ನೆನಪಿನ ಸುರುಳಿಗಳು

ರಚನೆ : ವೆಂಕಟೇಶ್ ಸುಬ್ಬಾಚಾರ್

----------------------------------

ನೆನಪಿನ ಸುರಳಿಗಳು ಸುತ್ತುತ್ತಲಿರುತ್ತವೆ, ಕಾಲದ ಸಂಕೋಲೆಯೊಳಗೆ ಸಿಲುಕಿವೆ ಎಲ್ಲವೂ. ವರ್ತಮಾನದ ಹೊತ್ತಿನಲ್ಲಿ ಭವಿಷ್ಯವನು ಯೋಚಿಸುತ್ತ, ಹಳೆಯದ ಚಿಂತನೆಗೆ ಮನಸು ತೂಗುತ್ತದೆ. ಕಳೆದ ದಿನಗಳು ಸಿಹಿಯಾಗಿ ಇರಲಿಕ್ಕೆ, ಸಾಧನೆಯ ಹಂಬಲ ಕೇಸುವಿನಲ್ಲಿ ಬೆಂದಿತ್ತು. ತಲುಪದ ಗುರಿಯ ನೋವಲ್ಲಿ, ಸಿಟ್ಟು-ಸೆಡರುಗಳು ಉಕ್ಕಿ ಬಂದವು. ಗೊತ್ತುಗುರಿಯಿಲ್ಲದ ವಿಧಿಗೆ ಹೊರಟ ಪಯಣ, ಎಡರು-ತೊಡರಿನೊಂದಿಗೆ ಸಾಗಿತು ನಿಧಾನವಾಗಿ. ತಪ್ಪು-ಒಪ್ಪುಗಳ ತೀರ್ಪಿಗೆ ತಲುಪುವ ಹೊತ್ತಿಗೆ, ದೂರದ ಪಯಣವೆನೆದು ಮುಗಿದಿತ್ತು. ಕಳೆದದನ್ನು ಪಡೆಯಲು ದಾರಿ ಉಳಿದಿಲ್ಲ, ಮುಂದಿನ ಹಾದಿ ಕಾಣದಾಗ, ಹಣೆಬರಹವನು ದೋಷಿಸುತ್ತ, ಬದುಕು ನಡೆಯುತ್ತಿದೆ — ನಿಧಾನವಾಗಿ, ನಿಶ್ಶಬ್ದವಾಗಿ.

----------------------------------

ನೋಂದಣಿ ಐಡಿ : KPFS2-6089

16
Votes
152
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top