ಕನ್ನಡದ ಕಂದ ಸದಾ ಆನಂದ
ರಚನೆ : ಲೋಹಿತ್ ಜೆ ಡಿ
----------------------------------
ಚೆಲುವ ಕನ್ನಡ ನಾಡಿದು ಸಾಂಸ್ಕೃತಿಕ ಕಲೆಗಳ ಬಿಡಿದು | ಪ್ರಕೃತಿ ಮಾತೆಯ ಗಂಧದ ಗುಡಿ ಮನತುಂಬಿ ನೀ ಕನ್ನಡ ನುಡಿ || ಕನ್ನಡ ಭಾಷೆಯಲ್ಲಿ ಪ್ರೀತಿಯನಿಟ್ಟು ನೂರು ಭಾಷೆಗೂ ಗೌರವ ಕೊಟ್ಟು | ನಾವೆಲ್ಲರೂ ಒಂದೇ ಎಂದು ಐಕ್ಯತೆ ಮೆರೆದವು ರಾಷ್ಟ್ರ ವ್ಯಾಪಿ ಸಾಮರಸ್ಯದಲ್ಲಿ ಬೆರೆತವು || ಬಂದವರೆಲ್ಲ ಬಂಧುಗಳು ಅವರಲ್ಲಿ ನಾವು ಒಂದುಗಳು | ಸಾಗರದ ಅಲೆಯೂ ಉಕ್ಕುವ ರೀತಿ ಸಹೋದರ ಮಮತೆಯು ನಮ್ಮೆಲ್ಲರ ಪ್ರೀತಿ||
----------------------------------
ನೋಂದಣಿ ಐಡಿ : KPFS2-6088