Submission 1549

ಅವಳಿಲ್ಲದೆ

ರಚನೆ : ಶಿವಕುಮಾರ್.‌ ಆರ್

----------------------------------

ಅವಳಿಲ್ಲದೆ, ಕಬ್ಬು ಕಹಿಯಾಗುವುದು, ಉಪ್ಪು ರುಚಿಗುಂದಬಹುದು, ಕುರುಪಿಯಾಗಬಹುದು ನಮ್ಮೀ ಹಸಿರು! ನಿದ್ದೆಗೆಡಬಹುದು ವಾಸ್ತವ ಒಪ್ಪದೆ; ಒಪ್ಪಿದರೇನು.. ಒಪ್ಪದಾದರೇನು.. ಅವಳಿಲ್ಲದೆ ಜಗವಿಲ್ಲರೆಂದರಾದೀತೆ ಸಖ? ಕಣ್ಣಿಗೆ ಕಾಣದೆ ಮಾಯೆಯಾದರು, ಅವಳ ಅಂಶವಿದೆ ನಿನ್ನರೂಪದಲಿ. ನಿನ್ನಲ್ಲಿಯೇ ಬದುಕಿಹಳು ತಾಯಿ ಪ್ರತಿಕ್ಷಣವು ಉಸಿರಾಗಿ. ಅವಳ ಗರ್ವ ನೀನು, ಗಾಂಭೀರ್ಯ ನೀನು, ಶಕ್ತಿ-ಯುಕ್ತಿ-ಶಾಂತಿ-ಪ್ರೀತಿ-ನಾಡಿ-ನುಡಿಗಳೆಲ್ಲವೂ ನೀನು. ನಿನ್ನ ಜೀವ ಬೇಗೆಯಾದರೆ, ತಾಯಿಯಾತ್ಮಕೆ ಮುದವಾದೀತೆ? ನೀನು ವಿಧಿಯಾಟವೆಂದರೆ, ಪ್ರಕೃತಿ ನಿಯಮವೆಂಬೆ ನಾನು. ಕಣ್ಣುತುಂಬಿದರು ಕಲ್ಲಾಗಿರು, ಎದೆಹುಕ್ಕಿದರು ಮುಳುಗದಿರು. ನಿನ್ನ ಜೀವವ ಬೆಂದರೆ ಅವಳ ಅಂಶವೇ ಸಾಯುವುದಲ್ಲವೆ?

----------------------------------

ನೋಂದಣಿ ಐಡಿ : KPFS2-6086

1
Votes
184
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top