ಅವಳೆಂದರೆ ಹಾಗೇಯೇ
ರಚನೆ : ಸೋಮಶೇಖರ ಬಿ ಎಂ
----------------------------------
ಸಾಯಿಸು ಸತಾಯಿಸು ನಿನ್ನ ಕಿರು ಬೆರಳ ತುಸು ತಾಗಿಸಿ ಮತ್ತೆ ಬದುಕಿಸು...! ಅಲಂಗಿಸು ಆಕರ್ಷಿಸು ನಿನ್ನ ಮುಂಗುರುಳ ತುಸು ಸರಿಸಿ ಮತ್ತೆ ಮೈ ಮರೆಸು...! ಕಂಗಡಿಸು ಕಾದಿರಿಸು ನಿನ್ನಮೋಹಕತೆಯ ತುಸು ಸೇರಿಸಿ ಮತ್ತೆ ಮಾರ್ದನಿಸು...! ಅವರಿಸು ಆದರಿಸು ನಿನ್ನ ಹೃದಯದ ಪರಿಧಿಗೆ ತುಸು ನನ್ನನ್ನೇ ಪರಿಗಣಿಸು ಕೇವಲ ನನ್ನನ್ನೇ ಪರಿಗಣಿಸು...!!
----------------------------------
ನೋಂದಣಿ ಐಡಿ : KPFS2-6085