Submission 1531

ಯಾರವಳು?

ರಚನೆ : ಸಂದೀಪ್ ಅಶೋಕ್ ಜನಕಟಿ

----------------------------------

ದಳಕಮಲಗಳ ಚೆಲುವು ಮೀರಿದ ನಯನ ಬೆಳ್ಳಕ್ಕಿ ನಾಚುವ ಬೆಳ್ಳನೆಯ ಬಣ್ಣ, ಮೂಗಿನ ಮೂಗುತಿ ಹೆಚ್ಚಿಸಿತೋ ಅವಳಂದವನ್ನ ನಾಚಿದೇನು ನಾನು ನೋಡಿ ಅವಳನ್ನು ಪ್ರೇಮಪುಷ್ಪದಂತ ತುಟಿಗೆ ಬಣ್ಣವೇಕೆ ಯಾರ ಅನುಮತಿ ಬೇಕು ದೃಷ್ಟಿ ತಾಗೋಕೆ ಇತ್ತು ಕೆನ್ನೆಯ ಮೇಲೊಂದು ಪುಟ್ಟ ಕಪ್ಪು ಚುಕ್ಕೆ ಆದರೂ ನಾಚಿಕೆ ಅವಳ ನೋಡೋಕೆ ಕಾಲ್ಲೆಜ್ಜೆ ಸದ್ದು ಮಳೆಹನಿ ನೃತ್ಯದಂತೆ ಮುಡಿಗಿಟ್ಟ ಮಲ್ಲಿಗೆ ನವಿಲಿಗೆ ಗರಿಯಂತೆ, ಅವಳ ರೂಪ ಸೌಂದರ್ಯ ಅಪ್ಸರೆಯರು ನಾಚುವಂತೆ ನೋಡುತಿಹವಿ ಕಣ್ಣುಗಳು ಅವಳನು ಮತ್ತೆ-ಮತ್ತೆ ಇದು ಯಾವ ಮೋಡಿಯೋ,ಅವಳನೆ ನೆನೆಯುವುದು ಮರಳಿ-ಮರಳಿ ನನ್ನೀ ಮನವು.

----------------------------------

ನೋಂದಣಿ ಐಡಿ : KPFS2-6076

1,140
Votes
2,178
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top