Submission 1529

ಕಾನನ ಕದನ

ರಚನೆ : ಆತ್ಮೀಯ ಸುಧಾಕರ

----------------------------------

ಅಳಿದಿದೆ ಕಾಡು, ನಿಂತಿದೆ ನಾಡಿನ ಗರ್ವ, ಹಸಿರು ಸತ್ತು, ಕಾಂಕ್ರೀಟಿನ ರೋದನ ಸರ್ವ. ವನ್ಯಜೀವಿಗಳ ಬದುಕು ಆಗಿದೆ ಈಗ ಪರದೇಶ, ಮನುಜನ ಆಸೆಗೆ ಬೇಕಿದೆ ಇನ್ನಷ್ಟು ಪ್ರದೇಶ. ​ಅವುಗಳ ದಾರಿಗಳೆಲ್ಲಾ ಈಗ ನಮಗೆ ಊರು, ಬಿಕ್ಕಟ್ಟಿನ ಮೂಲ ತಿಳಿದರೂ, ನಾವೇಕೆ ಮರುಳು? ಕಳೆದುಕೊಂಡ ನೆಲೆಯ ಹುಡುಕಿ ಅದು ನಾಡಿಗೆ ಬಂದರೆ, ಭಯ-ಕೋಪಗಳ ನಡುವೆ ಜಗಳ ಶುರು ಆದರೆ. ​ಪೈರು ಹಾಳಾದರೆ ರೈತನ ಕಣ್ಣಲ್ಲಿ ನೀರು, ಪ್ರಾಣ ಕಳೆದುಕೊಂಡರೆ ಮನುಜನಿಗೆ ಉರಿಯುವ ಬೆಂಕಿ. ನಾವಿಬ್ಬರೂ ಈ ಭೂಮಿಯ ಮಕ್ಕಳು ಎಂದು ಮರೆತೆವು, ಸಹಬಾಳ್ವೆಯ ಪಾಠವ ಎಂದೂ ಕಲಿಯಲಿಲ್ಲ. ​ಗೋಡೆ ಕಟ್ಟಿ ಬದುಕುವುದಲ್ಲ ಪರಿಹಾರ, ಸಮತೋಲನ ಕಾಯ್ದುಕೊಳ್ಳುವುದೇ ಈಗ ಆಧಾರ. ಕಾಡು ಉಳಿದರೆ, ನಾಡು ಬಾಳುವುದು ಸುಖದಿ, ಶಾಂತಿ ಇರಲಿ ನಮ್ಮ ಬದುಕಿನ ಪ್ರತೀ ಹೆಜ್ಜೆಯಲಿ.

----------------------------------

ನೋಂದಣಿ ಐಡಿ : KPFS2-6048

3
Votes
116
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top