ನೀ ಇಷ್ಟು ಗಟ್ಟಿಗ
ರಚನೆ : ಪ್ರದೀಪ್ ಕುಮಾರ್
----------------------------------
ಯಾರೋ ಕೇಳಿದರು ನನ್ನ, ನೀ ಇಷ್ಟು ಗಟ್ಟಿಗ ಹೇಗೆಂದು... ನಸು ನಕ್ಕು ನಾ ಮನದಲಿ ನೆನೆದೆ, ನಾ ಇಷ್ಟು ಗಟ್ಟಿಗ ಹೇಗೆಂದು... ನಾ ಮಲಗುವ ಹಾಸಿಗೆಯ ಕೇಳು, ಎಷ್ಟು ನೆನೆದಿರುವೆ ನನ ಕಣ್ಣೀರಲಿ... ನಾ ನೋಡುವ ಕನ್ನಡಿಯ ಕೇಳು, ನಾ ಹೇಗೆ ನೋಡುತಲಿರುವೆ ನನ್ನನೆ... ನಾ ಕೇಳುವ ಹಾಡನು ಕೇಳು, ನಾ ಎಷ್ಟು ಕಳೆದಿರುವೆನು ಅದರಳೆಂದು... ನಾ ನೋಡುವ ಚಂದಿರನ ಕೇಳು, ನಾನೇಷ್ಟು ಏಕಾಂಗಿಯಾಗಿರುವೆಂದು... ನಾ ಕಾಯುವ ಸಾವನು ಕೇಳು, ನಾನೆಷ್ಟು ಅದನು ಪ್ರೀತಿಸುವೆನೆಂದು...
----------------------------------
ನೋಂದಣಿ ಐಡಿ : KPFS2-6077