ಎಲೆ ಮಾನವ!
ರಚನೆ : Shivaraj SM
----------------------------------
ಬಂದೇವೊ ಭುವಿಗೇನ್ ತಂದೆವೊ? ಬಾರದಿದ್ದರೀ ಭೂವಿಗಾಗುತಿರಲಿಲ್ಲ ನಷ್ಟವೊ! ತುಂಬಿದೇವೊ ಭೂವಿಯ ತುಂಬೆಲ್ಲ ಕಲ್ಮಶ ವಿಷವೋ, ಕೋಮು – ಕುಲಗಳ ಸೆಣೆಸಾಟವೋ, ಸೆಣೆಸಾಡುವಮೊದಲರಿವಾಗದಾಯ್ತು, ಬಾರದೇ ಅಂತ್ಯ ಎಲ್ಲದಕು? ಕೊನೆಯುಂಟು ಎಲ್ಲತಕು, ಬೇಸರವಾಯ್ತು ಮಾನವನ ಮಾಯೆಯ ಮುಖವಾಡಕು.. ಏಕೀ ಪರದಾಟದ ಪ್ರಯಾಣ, ಬರುವುದೊಂದಿನ ನಿನಗೂ ಮರಣ, ಅದನರಿತು ಮೊದಲಾಗು ಸದ್ಗುಣ, ಈ ಬ್ರಹ್ಮಾಂಡಕೆ ನೀನೋರ್ವ ಕಣ!
----------------------------------
ನೋಂದಣಿ ಐಡಿ : KPFS2-6022