Submission 1463

ಮೌನದ ವಿವರ.

ರಚನೆ : Jeevan K

----------------------------------

ಓ ಮೌನ, ನೀ ಏಕೆ ಹೀಗೆ, ನೀ ಏಕೆ ಹೀಗೆ ? ನಿಲ್ಲಿಸಿದೆ ಆಲೋಚನೆಗಳುನ್ನೂ ಒಂದು ಗಳಿಗೆ ಮಾತಿನ ವಿರಾಮ ಬೇಕೆನಿಸಿತೇ ನಿನಗೆ ? ನೋವಿನ ಕೂಗು ನೀ ಕುಡಿದು ಹರ್ಷದ ನಗು ನೀ ಆಲಿಸಿ ಸಹಜ ಮಾತಿನ ಧ್ವನಿಯನ್ನೇ ಮೀರಿಸಿದೆ ! ನಿನ್ನೀ ಭಾಷೆ ಯಾರಿಗೂ ತಿಳಿಯದೆ ! ಸೋತ ಕನಸಿನ ಹೃದಯಕ್ಕೆ ನೀ ಹತ್ತಿರ ನೊಂದ ಕನಸುಗಳಿಗೆ ಸಾಂತ್ವಾನ ತುಂಬುವ ಸಹಕಾರ ಸುತ್ತುವ ಪ್ರಪಂಚ ಒಂದು ಕ್ಷಣ ನಿಲ್ಲಿಸಿ ನಿನ್ನೀ ಆಟ ಗೆಲ್ಲಲಾರು ಪ್ರಯತ್ನಿಸಿ ಓ ಮೌನ ನೀ ಏಕೆ ಹೀಗೆ ನೀ ಏಕೆ ಹೀಗೆ ?

----------------------------------

ನೋಂದಣಿ ಐಡಿ : KPFS2-6024

1
Votes
132
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top