Submission 1447

ಅರಿಯೆನು ಅರಿಯದಾದೆನು

ರಚನೆ : Harshitha Rani S.M

----------------------------------

ಕಲ್ಪನೆಯೋ, ಭಾವನೆಯೋ ಕಲ್ಪನೆಯೊಳಗಿನ ಭಾವನೆಯೋ? ಪ್ರೀತಿಯೋ, ಸ್ವಾರ್ಥವೋ ಪ್ರೀತಿಯೊಳಗಿನ ಸ್ವಾರ್ಥವೋ? ಮೋಹವೋ, ಪ್ರೇಮವೋ ಮೋಹದೊಳಗಿನ ಪ್ರೇಮವೋ? ಬಯಕೆಯೋ, ಭಯವೋ ಬಯಕೆಯೊಳಗಿನ ಭಯವೋ? ಅನುರಾಗವೋ, ಅನಿವಾರ್ಯವೋ ಅನುರಾಗದೊಳಗಿನ ಅನಿವಾರ್ಯವೋ? ತ್ಯಾಗವೋ, ತಿರಸ್ಕಾರವೋ ತ್ಯಾಗದೊಳಗಿನ ತಿರಸ್ಕಾರವೋ? ಬಂಧವೋ, ಬಂಧನವೋ ಬಂಧದೊಳಗಿನ ಬಂಧನವೋ? ಇಚ್ಛೆಯೋ, ಸ್ವೇಚ್ಛೆಯೋ ಇಚ್ಛೆಯೊಳಗಿನ ಸ್ವೇಚ್ಛೆಯೋ? ಭ್ರಮೆಯೋ, ನಂಬಿಕೆಯೋ ಭ್ರಮೆಯೊಳಗಿನ ನಂಬಿಕೆಯೋ? ಸತ್ಯವೋ, ಮಿಥ್ಯವೋ ಸತ್ಯದೊಳಗಿನ ಮಿಥ್ಯವೋ? ಅರಿಯೆನೋ, ಅರಿಯದಾದೆನೋ ಅರಿತು, ಅರಿಯದಂತಿರುವೆನೋ? ಅರಿಯದೆ, ಅರಿತಂತಿರುವೆನೋ? ಅರಿಯೆನು, ಅರಿಯದಾದೆನು.

----------------------------------

ನೋಂದಣಿ ಐಡಿ : KPFS2-6014

1
Votes
140
Views
1 Year
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top