ಭರತಮಾತೆಯ ವೀರಪುತ್ರರು
ರಚನೆ : ಮಾನಸ ವಿಜಯ್
----------------------------------
ದೇಶ ಕಾಯ್ವ ವೀರರೇ ನಮ್ಮೊಳಗಿನ ಧೀರರೇ ಭರತ ಮಾತೆಯ ಶೂರಪುತ್ರರೇ ಬದುಕುವ ಪರಿ ಬೇರೆಯೇ ಬದುಕಿನ ಗುರಿ ಒಂದೇ ರಕ್ಷಣೇ ನಮ್ಮ ರಕ್ಷಣೇ ||1|| ಮಳೆಯೇಇರಲಿ ಚಳಿಯೇ ಇರಲಿ ಬಿಸಿಲೇರಿ ಬರಲಿ ಹೇಗೆ ಇರಲಿ ಮನೆಯ ತೊರೆದು ಹೋರಾಟ ಮನದಲಿ ಶಾಂತಿಮಂತ್ರ ಯುದ್ಧತಂತ್ರ ಕರ್ತವ್ಯದ ಜೊತೆಯಲಿ ಬದುಕು ವಿರಿ ನೀವು ನಮ್ಮ ಕಲ್ಪನೆಗೂ ಮೀರುತಲಿ ||2|| ಮೈಯೆಲ್ಲಾ ಕಣ್ಣಾಗಿರಲು ಭಯವಿಲ್ಲ ಮನದಲಿ ದೇಶಪ್ರೇಮ ಮೊಳಗುತ್ತಿರಲು ಸೈನಿಕರ ಎದೆಯಲಿ ಹೋರಾಡುವ ಛಲ ವಿರಲು ಸಾವೇ ಕಣ್ಣೆದುರಲಿ ತ್ಯಾಗ-ಬಲಿದಾನಗಳ ಬಂಧನದ ಸುಳಿಯಲಿ||3||
----------------------------------
ನೋಂದಣಿ ಐಡಿ : KPFS2-2336