Submission 7362

ಚಿದಾನಂದ

ರಚನೆ : ಸುನೀಲ್ ಕೆ ಎಸ್

----------------------------------

ನಾನು ಲಿಂಗಾಯತ,ಬ್ರಾಹ್ಮಣನಲ್ಲ, ಕುರುಬ ಉಪ್ಪಾರ ವೈಶ್ಯನಲ್ಲ, ಹರಿಜನ ಗೊಲ್ಲ ಬೇಡನು ಅಲ್ಲ, ನನಗೆ ಜಾತಿ ಧರ್ಮ ಭಾಷೆಗಳ ಬೇಲಿಯಿಲ್ಲ ರಾಗ ದ್ವೇಷಗಳ ಅಂಟಿಲ್ಲ ಹುಟ್ಟು ಸಾವುಗಳ ಬಂಧನವಿಲ್ಲ ನನಗಿಲ್ಲ ಹಸಿವು ತೃಷೆ ಕಾಮನೆಗಳು ನನಗಿಲ್ಲ ರೂಪ ರಂಗುಗಳು ನಾನಿಲ್ಲ ಪಂಚಭೂತಗಳ ಹಂಗಿನೊಳು ನಾನಲ್ಲ ಮೋಹ ಮಾಯೆಯ ಬಾಧಿತನು, ನನಗಿಲ್ಲಿ ಹೆಸರಿಲ್ಲ. ನಾನಲ್ಲ ಈ ಕಾಯದ ಮಾಲೀಕನು ನಾನೊಂದು ರೂಪವಿಲ್ಲದ ಗುಣವಿಲ್ಲದ ಸಾವಿಲ್ಲದ ಚಿದಾನಂದ ಆತ್ಮ ರೂಪನು

----------------------------------

ನೋಂದಣಿ ಐಡಿ : KPFS2-2335

6
Votes
99
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top