Submission 7366

ಯುವಶಕ್ತಿ

ರಚನೆ : ಲಕ್ಷ್ಮೀನಾರಾಯಣ ವಿ.

----------------------------------

ಯುವಶಕ್ತಿ ಮುನ್ನುಗ್ಗು.. ದಿನದ ಬೆಳಕಲ್ಲಿ ಎಲ್ಲರೂ ಕಾಣಲಿ ಮೌನದ ಮೊಗ್ಗು ಅರಳಿ ಹೂವಾಗಲಿ ಚಿಂತೆಯ ಬದುಕು ಬದಲಾಗಲಿ ಭರವಸೆಯ ಉತ್ಸಾಹ ನಿಲ್ಲದಿರಲಿ. ಸುಡುವ ಬಿಸಿಲೆ ಇರಲಿ ಮರುಭೂಮಿಯೇ ಹುಡುಕು ಬಿಡಬೇಡ ನೀರ ಚಿಲುಮೆ ನಿಟ್ಟುಸಿರ ಹಿಮ್ಮೆಟ್ಟು ಬಿಟ್ಟು ನಿರಾಶೆ ಮುನ್ನುಗ್ಗು ಸಿಗುವುದು ಗೆಲುವಿನ ಒಲುಮೆ! ಕಗ್ಗತ್ತಲೊಳಗೂ ನಗಬಹುದು ಚಂದಿರ ಕಗ್ಗಲ್ಲ ಕಡೆದರೆ ಮೂರ್ತಿಯು ಸುಂದರ ಕುಗ್ಗದಿರು ಯುವ ಶಕ್ತಿ ಗುರಿಯನ್ನು ಮುಟ್ಟು ಸಾಹಸದ ಸಾಧನೆಯ ಸೇತುವೆಯ ಕಟ್ಟು

----------------------------------

ನೋಂದಣಿ ಐಡಿ : KPFS2-2337

0
Votes
89
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top