Submission 7350

ಎಲ್ಲವೂ ನೀನೆ

ರಚನೆ : ಎ. ಪಿ. ಶರತ್

----------------------------------

ತತ್ವಕ್ಕೆ ಗುರುವಾದೆ, ಮನುಷ್ಯತ್ವಕ್ಕೆ ಗುರಿಯಾದೆ, ಮನದೊಳಗೆ ಅಡಗಿ ಹೊರಗೆಲ್ಲ ಮರೆಯಾದೆ ಬಯಸೊ ಮನಕೆ ಹುಡುಕೊ ಪರಿಯಾದೆ. ನಂಬಿಕೆಗೆ ನೆರವಾದೆ, ಬಿಸಿಲಲ್ಲಿ ಮರವಾದೆ, ಶೋಷಿತರಿಗೆ ಹೊರೆಯಾದೆ, ಉಳಿದ ಬರೆಯಾದೆ, ಅವರವರಲೇ ಮೇಲು ಕೀಳಾದೆ, ಸೃಷ್ಟಿಯಲಿ ವೈವಿಧ್ಯಮಯವಾದೆ ಕೈಮುಗಿದು ಕರೆದಲ್ಲಿ ಅಲ್ಲಿಯೇ ವರವಾದೆ, ದೂರ ದೂರದ ನಡಿಗೆ; ತರ ತರದ ಉಡುಗೆ, ನಿನ್ನೊಲಿಸೊ ಪರಿಗೆ ನಾ ಚಕಿತನಾದೆ! ವೇದ ವಿದ್ಯಗಳ ವೈಭವದಿ ಮೆರೆದವನಾದೆ, ಬಸವ ತತ್ವಕ್ಕೆ ಮೆಚ್ಚಿ ಕರಗಿ ಸಂಗಮವಾದೆ, ಎಲ್ಲೆಲ್ಲೂ ನೀನಿರೇ, ಎಲ್ಲವೂ ನೀನೆ ಆಗಿರೆ; ನಿನ್ನರಿಯಲು ನಾ ಸೋತು ಹೋದೆ! ಮತಿಗೇಡಿ ನನ್ನರಿವು; ಬರಿ ಹುಸಿಯು 'ನಾನು'! ನಿನಗಾಗಿ ಹುಡುಕುತಲಿ; ಮರೆತಿಹೆನು, ನೀನಿತ್ತ ಈ ಬದುಕ ಜೇನು.

----------------------------------

ನೋಂದಣಿ ಐಡಿ : KPFS2-2328

0
Votes
90
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top