Submission 7352

ನೆನಪಲ್ಲೇ ದಿನಗಳು

ರಚನೆ : ಭುವನ್ ಕೆ ಬಿ

----------------------------------

ಆಡಂಬರ ಜೀವನ ಆಡಿಸುತ್ತಿರಲು ಖಾಲಿ ಕಾಣುತ್ತಿವೆ ಹಳ್ಳಿ ಊರುಗಳು ಕೆಲಸವ ಮಾಡಲು ವಯಸ್ಸಾದವರಿರಲು ಪಾಳು ಬಿದ್ದಿವೆ ತೋಟ ಗದ್ದೆಗಳು ತೂತುಬಿದ್ದಿವೆ ಬೆತ್ತ ಬುಟ್ಟಿಗಳು ಕೈತಪ್ಪಿ ಹೋಗುತ್ತಿದೆ ಕೋಳಿ ಮರಿಗಳು ತಾಯಿ ಕೋಳಿ ಮನೆಯೊಳಗಿರಲು ಒದ್ದಾಡಿ ಚಡಪಡಿಸುತ್ತಿದೆ ಮರಿ ನೋಡಲು ಪ್ರೀತಿ ಮಮತೆ ಸಂಬಂಧಗಳೆಲ್ಲಿವೆ ಬಿಡುವಿಲ್ಲದೆ ಓಡುತ್ತಿರುವರು ಮಕ್ಕಳು ಮರಿಗಳು ಅಜ್ಜ ಅಜ್ಜಿಯನು ಚಿತ್ರದಲ್ಲಿ ನೋಡುವರು ಅನುಭವಿಸಬಹುದೇ ಪ್ರೀತಿ ವಾತ್ಸಲ್ಯಗಳು ಮರೆತು ಹೋಗಿವೆ ಹಳೆ ದಿನಗಳು ಖಾಲಿಯಾಗಿವೆ ಕೋಣೆಗಳು,,,,,,

----------------------------------

ನೋಂದಣಿ ಐಡಿ : KPFS2-2329

0
Votes
84
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top