ಅಪಸವ್ಯ.
ರಚನೆ : ತುಂಗಾ ಪೋದ್ದಾರ
----------------------------------
ಹಿಂತಿರುಗಿ ನೋಡಿದೆ, ಭುವಿಗೆ ಕಳುಹಿದವರರೊ, ನೂಕಿದವರಿಲ್ಲ!ಕೈ ಚಾಚಿದವರಿಲ್ಲ! ಜಾರಿದೆ ತಾಯ್ ಋಣವ ತೀರಿಸಲೊಮ್ಮೆ!! ಬೇಡವೆಂದು ಅಲವತ್ತುಕೊಂಡರು, ಬಿಡಲಿಲ್ಲ ಭುವಿಯ ಪಾಶ! ಬರಬೇಕಾಯ್ತು ಧರ್ಮ ಭೂಮಿಗೆ, ಎಲ್ಲರೂ ಕರೆವ ಕರ್ಮ ಭೂಮಿಗೆ!! ಹುಟ್ಟಿದೆ ನು ಅಳುಅಳುತ್ತ! ನಡೆದೆ ಎಲ್ಲರನು ಅಳಿಸುತ್ತ! ಬಾಳಿದೆನು ನಾಲ್ಕು ದಿನ, ನಕ್ಕೆನು ಎಲ್ಲರ ನಗಿಸುತ್ತ!! ಅರಿಯದಾದೆ ಜಗದ ನಿಯಮವ! ಮರಳಿ ಸೇರುವ ಗಮ್ಯವ.!!
----------------------------------
ನೋಂದಣಿ ಐಡಿ : KPFS2-2330