ಕನ್ನಡ ನಾಡು
ರಚನೆ : ಸೌಮ್ಯ.ಎಸ್
----------------------------------
ಕನ್ನಡ ನಾಡಿದು ಗಂಧದ ಬೀಡು ಕನ್ನಡ ಕಂಪಿನ ಹೊನ್ನಿನ ನಾಡು ಕವಿ ವರೇಣ್ಯರು ಜನಿಸಿದ ಪುಣ್ಯ ಭೂಮಿ ಗಿರಿವನ ಸೊಬಗಿನ ಭವ್ಯ ಭೂಮಿ|| ಕಾವೇರಿ ಕೃಷ್ಣೆ ತುಂಗೆ ಹರಿಯುವರಿಲ್ಲಿ ಜೋಗದ ಸಿರಿ ಸಹ್ಯಾದ್ರಿ ಮಲೆಗಳ ಮಡಲಿನಲ್ಲಿ ಚಿನ್ನದ ಗುಡಿಯಿದು ಕನ್ನಡ ನಾಡು, ಗಂಧದ ಗುಡಿಯಿದು ಕನ್ನಡ ನಾಡು|| ಕಸ್ತೂರಿ ಕನ್ನಡ ನಮ್ಮಯ ಭಾಷೆ ಹರುಷ ಕೊಡುವ ಮನ ತಣಿಸುವ ಭಾಷೆ ಹೃದಯ ಮಿಡಿವ ನುಡಿಸುಮಗಳ ಸುಧೆಯಲಿ ಚೆಲುವಿನ ಕನ್ನಡ ಸೊಬಗಿನ ಕನ್ನಡ|| ಇದುವೇ ನನ್ನಯ ಹೆಮ್ಮೆಯ ನಾಡು ಅದುವೇ ನಮ್ಮ ಕನ್ನಡ ನಾಡು||
----------------------------------
ನೋಂದಣಿ ಐಡಿ : KPFS2-2246