Submission 7258

ಸತ್ಕಾ (ಖಾ)ರ

ರಚನೆ : ಸಾರಥಿ ಹೆಚ್.ಆರ್

----------------------------------

ರುಚಿಕರವಾಗಿ ಅಡುಗೆ ಮಾಡುವುದೇ ನನ್ನವಳ ಕಲೆ.. ಅವಳ ಕೈ ರುಚಿ ಸವಿದೊಡನೆ ಮನಸ್ಸು ಹೇಳುವುದು ಭಲೇ ಭಲೇ.. ನನ್ನಾಕೆ ಪಾಕ ಪ್ರವೀಣೆ.. ಇವಳು ಮಾಡುವ ಪಕೋಡದ ರುಚಿಯ ಬೇರೆಲ್ಲೂ ನಾ ಕಾಣೆ.. ಹಾಗಂತ ನಾ ಕರೆ ತಂದರೆ ನೆಂಟರಿಷ್ಟರ ದಿನಂಪ್ರತಿ.. ಕೋಪಿಸಿಕೊಳ್ಳದೆ ಹಾಗೆ ಇರಲಾದೀತೇ ನನ್ನ ಸತಿ.. ನೋಡಬಹುದು ಕಾಫಿ,ಟೀ,ತಿಂಡಿ ತಿನಿಸುಗಳ ತಿಂದ ಮನಸುಗಳ ಆನಂದದ ಸನ್ನಿವೇಶ.. ಆನಂತರ ನೋಡಲಾಗುವುದಿಲ್ಲ ಕಾಫಿ,ಟೀ,ತಿಂಡಿ ತಿನಿಸುಗಳ ಪಾತ್ರೆಗಳ ತೊಳೆಯುವ ಮನಸ್ಸಿನ ಆವೇಶ!.

----------------------------------

ನೋಂದಣಿ ಐಡಿ : KPFS2-2247

89
Votes
573
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top