ಜೀವನ ಜಾತ್ರೆ
ರಚನೆ : ಡಾ. ವಿಜಯದಾಸ್
----------------------------------
ಜೀವನವೆಂಬುದು ಮಾನವನ ಜಾತ್ರೆ ಅಂತ್ಯದಲ್ಲಿ ಕಾಣುವದು ಶೂನ್ಯದಾ ಯಾತ್ರೆ . ರಂಗು ರಂಗಿನ ಆಕರ್ಷಣೆ , ಮೋಹ ಮೋಜಿಗೆ ಪ್ರೇರಣೆ, ಮೋಸ ವಂಚನೆಯ ಸಲಕರಣೆ ನೋಡುತ್ತಾ ಹೋದರೆ ಮತಿ ಭ್ರಮಣೆ ಸಾಗುತ್ತಾ ನಡೆದಾಗ ನೂರಾರು ಕವಲು ಸರಿಯೋ ತಪ್ಪೋ ಸಾಗಿದ್ದೇ ಹುಯಿಲು , ಹಾದಿ ಯಾವುದೊ ಎಲ್ಲಿಗೋ ಒಯ್ಯಲು ಕಲ್ಲು ಮುಳ್ಳುಗಳು ಅಲ್ಲಲ್ಲಿ ಬಯಲು ಜಾತ್ರೆ ಇರುವಷ್ಟು ದಿನ ಎಲ್ಲೆಲ್ಲೂ ವ್ಯಾಪಾರ, ಲಾಭ ನಷ್ಟಗಳ ಬಿಡುವಿಲ್ಲದ ಲೆಕ್ಕಾಚಾರ, ಸಿರಿತನವು ಬರಲು, ಆಗಲೇ ಅಹಂಕಾರ, ಅಪರೂಪಕೆ ಕಾಣುವದು ಅಲ್ಲಲ್ಲಿ ಉಪಕಾರ
----------------------------------
ನೋಂದಣಿ ಐಡಿ : KPFS2-2237