ವಿಪರ್ಯಾಸ
ರಚನೆ : ಭಾರತೀ ಎಸ್
----------------------------------
ಬರೆಯುವಾಸೆ ಇತ್ತು ಖುಷಿ ಖುಷಿಯ ದಾಂಪತ್ಯ ಕವನ ದೊಡ್ಡ ಸುದ್ದಿ ಮಾಡಿ ಅಣಕಿಸುತ್ತಿದೆ ವಿಚ್ಛೇದನ! ಹಾಸ್ಯ ಕವನ ಗೀಚಿ ನಗಿಸಬಹುದಿತ್ತು ಓದಿ ನಗಲು ಜನರಿಗೆಲ್ಲಿದೆ ಪುರಸೊತ್ತು? ರಾಜಕೀಯವನ್ನು ಕವಿತೆಗಿಳಿಸೊಣವೆಂದರೆ ಮೂರೂ ಬಿಟ್ಟವರನ್ನು ಯಾರು ಒಪ್ಪುತ್ತಾರೆ? ಯುದ್ಧದ ಮಾತು ರುದ್ರ ರಂಜಿತವಾಗಬಹುದಿತ್ತು ಅದಕ್ಕೂ ಬೇಕೇನೋ ಟ್ರಂಪಣ್ಣನ ದಸಕತ್ತು?! ಯೌವನದ ರಸಗಳನ್ನು ತೋರಿದರೆ ಕವಿತೆಗಳಲ್ಲಿ ಓದುವ ಪೀಳಿಗೆ ಮೀಯುತ್ತಿದೆ ಜಾಲತಾಣಗಳಲ್ಲಿ!! ನಮ್ಮ ಬದುಕಿನ ವಿಪರ್ಯಾಸವೆಂದರೆ ಹೀಗೇ ಒಂದನ್ನು ಬಯಸಿದರೆ,ಸಿಗುವುದು ಮತ್ತೊಂದು ಬಗೆ ಕವಿತೆಯಲ್ಲಿ ತುರುಕಿದರೆ ಬಗೆಬಗೆಯ ವರ್ಣನೆಗಳನ್ನು ತಪ್ಪಿಸಲಾಗದು ಜನರಿಗೆ ಒದಗುವ ವಾಸ್ತವವನ್ನು!
----------------------------------
ನೋಂದಣಿ ಐಡಿ : KPFS2-2236