Submission 7192

ಜಗದ ಬೆಳಕು ನನ್ನ ಭಾರತಿ(ತ)

ರಚನೆ : ಶ್ರೀಮತಿ ರಶ್ಮೀ.ಕೊ.ಅರವಟಗಿಮಠ

----------------------------------

ಮಾತೆಯೇ ಈ ಮನದ ಸನ್ನಿಧಿ ನಿನ್ನ ರೂಪವ ನೆನೆದಿದೆ,, ತಾಯಿ-ಭಾರತಿ ನಿನ್ನ ಪುಣ್ಯದ ಚರಣಸ್ಪರ್ಶಕೆ ಕಾದಿದೆ,. ||ಪ|| ವಿವಿಧ ವೇಷದಲಿ, ವಿವಿಧ ಭಾಷೆಯಲಿ ನಿನ್ನ ನಾಮವೇ ಸಂಸ್ಕೃತಿ,, ಏಕತೆಯನೆ ಸಾರಿ ಮೆರೆದಿದೆ ನಿನ್ನ ಮಡಿಲಿನ ಸಂಪ್ರೀತಿ,. ||೧|| ಕೋಟಿಜೀವಗಳು ಒಂದೇ ಸೂರಿನಡಿ ಜಾತಿ- ಮತಗಳ ಮರೆತಿಹರು,, ಸನಾತನತೆಯನೇ ಜಗಕೆ ಹರಡಿ ನಮ್ಮದೆನುತ ಬೀಗುತಿಹರು,. ||೨|| ಮಧುರಭಾವದ ಮಮತೆಯ ಧಾತ್ರಿಯೇ ನಿನ್ನ ಸೇವೆಯೇ ನಮ್ಮಾಶಯ,, ಜೀವತೊರೆದರೂ ನಿನ್ನ ಕಾವೆವು ದಿವ್ಯಪಾದಕಿಡುವೆವು ಭಾಷೆಯ. ||೩||

----------------------------------

ನೋಂದಣಿ ಐಡಿ : KPFS2-2199

0
Votes
87
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top