ಕರುಣೆಯ ಕರ್ನಾಟಕ ದೇವಿ
ರಚನೆ : ಡಾ. ಸುಶ್ಮಿತ ಅಯ್ಯನಹಳ್ಳಿ ಮಠ
----------------------------------
ಕರುಣೆಯ ಕರ್ನಾಟಕ ದೇವಿ ಕಿರು ನಗೆ ಬೀರೆಯ ಒಮ್ಮೆ (ಪ) ಕಿರೀಟದಿ ಭೀಮ ಹರಿಯುತಲಿಯಳು ನಡುವನು ತುಂಗ ಅಲಂಕಾರಿಸಿಹಳು ಕಾಲಡಿ ಕಾವೇರಿ ಪಾದವ ತೊಳೆದಿಹಳು ಕಿರು ನಗೆ ಬೀರೆಯ ಒಮ್ಮೆ (1) ಅರ್ದ ಚಂದ್ರನಂತಹ ನಿನ್ನಾ ರೂಪ ಬೀರಲಿ ಅರ್ದ ಚಂದ್ರನಂತ ನಗೆಯ ಭಾರತಾoಬೆಯ ಮಗಳೇ ಕಿರಿಯ ಕಿರು ನಗೆ ಬೀರೆಯ ಒಮ್ಮೆ (2) ಅಮೂಲ್ಯವನ್ನೆಲ್ಲ ನಿನ್ನಲೇ ಕೂಡಿ ಹಸಿರನು ತೊಟ್ಟ ಸುಂದರ ನಾರಿ ನಿನ್ನ ಮಗುವಿಗೆ ಕರುಣೆಯ ತೋರಿ ಕಿರು ನಗೆ ಬೀರೆಯ ಒಮ್ಮೆ (3)
----------------------------------
ನೋಂದಣಿ ಐಡಿ : KPFS2-2198