Submission 7050

ಪುಸ್ತಕ ಗೆಳೆಯ

ರಚನೆ : ಸಿದ್ದು.ಬಾ.ದಳವಾಯಿ

----------------------------------

ಪುಸ್ತಕ ಎಂಬಾತನೊಬ್ಬ ನನಗೆ ಗೆಳೆಯ ಸಿಕ್ಕ ಅಜ್ಞಾನವೆಂಬ ನಿದ್ದೆಯಿಂದ ಎಬ್ಬಿಸಿ ಮನಹೊಕ್ಕ ಚರಿತ್ರೆಯ ತಿಳಿಸಿ ಅನುಭವಗಳ ಪಾಠ ಕಲಿಸಿದ ಗುಲಾಮಿತನ ಬಿಡಿಸಿ ಸ್ವಾಭಿಮಾನದೌತನ ಬಡಿಸಿದ ಮೂಕನಾಗಿದ್ದವನ ಬಿಗಿದಪ್ಪಿ ಮನಸಾರೆ ಮಾತಾಡಿಸಿದ ಮುಗ್ಧ ಮನದಲಿ ವಿಚಾರಗಳ ಹಾವಳಿ ಎಬ್ಬಿಸಿದ ಅಜ್ಞಾನವ ಕಳೆದು ವಿಜ್ಞಾನದೆಡೆಗೆ ವಿಹರಿಸುತ್ತಾ ಪಾಮರ ಪ್ರಾಣದೊಳಗೆ ಆತ್ಮವಿಶ್ವಾಸ ತುಂಬುತ್ತಾ ಒಂದೊಂದು ಸಲ ಒಂದೊಂದು ರೀತಿ ನಗಿಸುತ್ತಾ ಮತ್ತೊಂದು ಸಲ ಭಾವಹೊಕ್ಕು ಕಣ್ಣಾಲಿ ತೊಯಿಸುತ್ತಾ ಚಿಂತೆಗೆ ಬಿದ್ದ ಬುದ್ಧಿಯ ತಂದು ಚಿಂತನೆಗೆ ಹಚ್ಚಿದನು ಕತ್ತಲೆಯಲ್ಲಿ ಹುಡುಕಾಡಿದ ಹಾದಿಗೆ ದಾರಿದೀಪವಾದನು ಕಲ್ಪನೆಗಳಿಗೆ ಗತಿ ಕಾಣಿಸಿ ನೈಜತೆಯ ಬಿಂಬವಾದನು ಮೌಢ್ಯತೆಯ ತುಳಿದು ದಿವ್ಯಪ್ರಜ್ಞೆಯ ಒಳಗಿಳಿಸಿದನು

----------------------------------

ನೋಂದಣಿ ಐಡಿ : KPFS2-2086

0
Votes
115
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top