ಚೈತ್ರ ಚಿತ್ತಾರ
ರಚನೆ : ಮಹಿಮಾ ಬಿ.
----------------------------------
ಚೆಂದದ ಕುಂಚದಿ ಚೈತ್ರವು ಬರೆಯಿತು ಒಲವಿನ ಚೆಲುವಿನ ಚಿತ್ತಾರ | ಕೋಗಿಲೆ ಕಂಠದಿ ಕೇಳಿದೆ ಕಲರವ ಗಾನದ ಗಂಧವು ಘಮಿಸುತಿದೆ | ಸೃಷ್ಟಿಯ ಸೊಬಗಿನ ಚೆಲುವಿನ ಸೆಲೆಯು ಭಾವದ ಬಂಧವ ಬೆಸೆಯುತಿದೆ || ನಲ್ಮೆಯ ನಗುವದು ನೂರ್ಮಡಿಯಾಗಿರೆ ಕನಸುಗಳೇತಕೋ ಕೊನರಿಹುದು | ಹೊಸವರುಷದ ಈ ಹರುಷದ ದಿನವದು ಬೆರಗಿನ ಭಾಷ್ಯವ ಬರೆದಿಹುದು || ನಿನ್ನೆಯ ನೋವುಗಳೆಲ್ಲವೂ ನಶಿಸಲಿ ನಾಳೆಯ ನಲಿವಲಿ ನೆಮ್ಮದಿಯು | ಸಿಹಿಕಹಿಗಳು ಸಮ್ಮಿಳಿತದಿ ಸಾಗಲು ಹೊಸ ಸಂವತ್ಸರ ಮುನ್ನುಡಿಯು ||
----------------------------------
ನೋಂದಣಿ ಐಡಿ : KPFS2-2088