Submission 7048

ಭಾರ

ರಚನೆ : ಡಾ. ನಿಶಿತಾ

----------------------------------

ಅಮ್ಮ ಹೇಳಿದ ಭೂಮಿತೂಕದ ಅಳೆದ ಸುರಿದ ಬುದ್ಧಿ ಮಾತು ಎಂದೂ ಭಾರವಾಗಿರಲಿಲ್ಲ ಅಮ್ಮ ಹೇಳದ ನೂರೆಂಟು ಜಟಿಲ ಸಮಸ್ಯೆಗಳ ಗಂಟು ಎಂದೂ ಹಗುರವಾಗಿರಲಿಲ್ಲ ಅಮ್ಮನೆಂದೂ ಕೇಳುವ ಎಷ್ಟೊತ್ತಿಗೆ ಬರುತ್ತಿ ಎಂಬ ಪ್ರೀತಿ ಪ್ರಶ್ನೆಗಳು ಎಂದೆಂದೂ ಭಾರವಾಗಿರಲಿಲ್ಲ ಅಮ್ಮನೆಂದೂ ಕೇಳದ ಯಾಕೆ, ಹೇಗೆ, ಯಾವಾಗ_ಕ್ಕೆ ಉತ್ತರಗಳು ಅಂದಂತೂ ಹಗುರವಾಗಿರಲಿಲ್ಲ ಆದರೆ ಈ ಪ್ರಶ್ನೆಗಳನ್ನು ಅಮ್ಮನಲ್ಲದೆ ಬೇರೆ ಯಾರೇ ಕೇಳಿದರೂ ಅದು ಹೊರಲಾರದ ಭಾರ.

----------------------------------

ನೋಂದಣಿ ಐಡಿ : KPFS2-2081

0
Votes
81
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top