Submission 7032

ನನ್ನ ಒಲವಿನ ಮಳೆರಾಯ

ರಚನೆ : ಶ್ರೀಶೈಲ

----------------------------------

ಉರಿವ ಬಿಸಿಲಿಗೆ ತತ್ತರಿಸಿ ಹೋಗಿದ್ದ ಈ ಪುಟಾಣಿ ಪೋರನಿಗೆ ಮಳೆ ಎಂಬ ನೀರನ್ನು ಎರೆದು ತಂಪಾಗಿಸಿದನು! ಉರಿವ ಬಿಸಿಲಿಗೆ ಕೋಪಗೊಂಡಿದ್ದ ಈ ಪುಟಾಣಿ ಪೋರನಿಗೆ ತಂಪಾದ ಮಂಜಿನ ಹನಿಗಳನ್ನು ನೀಡಿ ಶಾಂತಗೊಳಿಸಿದನು! ಉರಿವ ಬಿಸಿಲಿಗೆ ಕೆಟ್ಟ ವಾಸನೆಯನ್ನು ಸ್ವೀಕರಿಸುತ್ತಿದ್ದ; ಈ ಪುಟಾಣಿ ಪೋರನಿಗೆ, ಮಳೆ ನೀರನ್ನು ಭೂತಾಯಿ ಒಡಲಿಗೆ ಭೂಮಿಯಿಂದ ಸುವಾಸನೆಯನ್ನು ನೀಡಿದನು! ಉರಿವ ಬಿಸಿಲಿಗೆ ಅರಣ್ಯದಲ್ಲಿ ಗಿಡಮರಗಳೆಲ್ಲ ಕಣ್ಣೀರು ಸುರಿಸುತ್ತಿದ್ದವು ಕಣ್ಣೀರನ್ನು ಒರೆಸುವ ಜಿಟಿ ಜಿಟಿ ಮಳೆಯನ್ನು ಸುರಿಸಿದನು! ಉರಿವ ಬಿಸಿಲಿಗೆ ಕಡಲುಗಳು ನಿಶ್ಯಬ್ದವಾಗಿದ್ದವು, ಮುಂಗಾರು ಎಂಬ ಮೊದಲ ಮಳೆಯನ್ನು ಸುರಿಸಿ ಮೊದಲ ಚಾಲನೆಯನ್ನು ನೀಡಿದನು..! ಬಂದಾ! ಬಂದಾ! ಅವನೇ ನನ್ನ ಮುಂಗಾರಿನ ಮಳೆ ಸುರಿಸುವ ಮಳೆರಾಯನು!

----------------------------------

ನೋಂದಣಿ ಐಡಿ : KPFS2-2062

0
Votes
103
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top