ಪುಷ್ಪ ಪ್ರಲಾಪ
ರಚನೆ : ದೇವಿಕಾ ಟಿ.ಎಂ
----------------------------------
ಕಾತರದಿ ಕಾದಿಹೆನು ಎಲ್ಲಡಗಿ ಕುಳಿತಿರುವೆ? ನಿನಗಾಗಿ ಮಧುವನ್ನು ನಾ ಹಿಡಿದು ನಿಂತಿರುವೆ ಅಲ್ಲೊಂದು ಇಲ್ಲೊಂದು ಖಗ-ದಂಬಿಗಳು ಬಂದು ಸಿಹಿಯಾದ ಮುತ್ತಿಡಲು ಹವಣಿಸುತಲಿಹರು ನನ್ನೆದೆಯ ಬಟ್ಟಲಲಿ ತುಳುಕುತಿಹ ಭಾವಗಳ ಕಾಪಿಟ್ಟು ನಿನ್ನ ಬರುವಿಕೆಯ ನಾ ಜಪಿಸುತಿಹೆನು ಸಹಿಸಲಾರೆನು ಇನಿಯ ಈ ವಿರಹ ವೇದನೆಯ ದಯಮಾಡಿ ದರುಶನವ ನೀಡು ಬಾ ಸನಿಹ ನಿನ್ನೊಡನೆ ಸರಸದಲಿ ಮುಳುಗಿ ಮೈ ಮರೆತು ಶ್ರೀಕಾರ ಬರೆಯುವೆನು ಹೊಸ ಹುಟ್ಟಿಗೆ ಕಾಯ್ಗಟ್ಟಿ ಹಣ್ಣಾಗಿ ಭುವಿ ಒಡಲ ಸೇರಿದರೂ ಮತ್ತೆ ಬರುವೆನು ಹುಟ್ಟಿ ಮಧುವನ್ನು ಹಿಡಿದು ಸದಾ ಉಣಿಸುವೆನು ಸಿಹಿಯನ್ನು ನಿನ್ನ ಸಂತತಿಗೆ ಸಾಗುತಿದ್ದರೆ ಈ ನಮ್ಮ ಸಂಬಂಧ ಪ್ರತಿ ಜನ್ಮಕೆ...
----------------------------------
ನೋಂದಣಿ ಐಡಿ : KPFS2-2061