ಸೀತಾಯಣ
ರಚನೆ : ಶ್ರೀ ವರ್ಷ ಜೋಯಿಸ್
----------------------------------
ನುಂಗಿದಳು ಕೊಟ್ಟ ಕಷ್ಟವ ಬೀರಿದಳು ನಗೆಯ ಹೊನಲುನು ತನಗಾಗಿ ಅಲ್ಲ ತನ್ನವರಿಗಾಗಿ ದಾರಿ ಕಾಣದೇ ಇದ್ದರೂ ಸಾಗಿದಳು. ಒಡಲೊಳಗಿನ ಜ್ವಾಲೆಯನೇ ಕಾದಿಹಳು ಭರವಸೆಯ ದೀಪವೆಂದು ಹಗಲು ಕಳೆದವು..ಇರುಳು ಕಳೆದವು ಕಾಯುವ ಆಟ ಮುಗಿಯದಾಯಿತು. ಸರಿದವು ಕವಿದಿಹ ಕಾಮೋ೯ಡ ಚಿಮ್ಮಿತು ರವಿಯ ಕಾಂತಿ.. ರವಿವಂಶದ ಕಾಂತಿ ಕಾದ ಕಂಗಳು ತುಂಬಿ ನಿಂತವು..ಆನಂದಿಂದ ಕಂಡು ರಾಮನ ಸೀತೆ..ಅಂಗಳದಿಂದ.
----------------------------------
ನೋಂದಣಿ ಐಡಿ : KPFS2-2059