Submission 7026

ನನ್ನೊಳಗಿನ ನಾನು

ರಚನೆ : ವೈಶಾಲಿ ಪಿ.ಎಸ್

----------------------------------

ಬದುಕಿನ ಪಥವ ಬದಲಾಯಿಸುವ ಆಸೆ, ಬದಲಾಯಿಸಿ ಬದುಕುವ ಆಸೆ ಬಸವಳಿದು ಮಸುಕಾದ ಕನಸಿನ ಚಿತ್ರಗಳಿಗೆ, ಮತ್ತೆ ಬಣ್ಣ ತುಂಬಿ ಅರಳಿಸುವ ಆಸೆ ನನ್ನವರೊಳಗೆ ನನ್ನನ್ನೇ ಹುಡುಕುವ ಆಸೆ, ನಾನವರಿಗೆ ಯಾರೆಂಬುದನ್ನು ತಿಳಿಸುವ ಆಸೆ ದಾಳ ಉರುಳಿಸಿದಂತೆ ಆಯ್ಕೆ ಬದಲಿಸುವವರೊಳಗೆ, ನನ್ನವರಾರೆಂಬುದನ್ನು ಕಂಡುಕೊಳ್ಳುವ ಆಸೆ ಈ ಎಲ್ಲಾ ಆಸೆಗಳ ಸೆರೆಯಲ್ಲಿ ಸಿಕ್ಕಿ, ನನ್ನವರನ್ನು ಕಂಡುಕೊಳ್ಳುವ ಭರದಲ್ಲಿ ನನ್ನನ್ನೇ ಕೊಂದುಕೊಂಡ ಭಾವ ಕೊನೆಗೆ ಎಲ್ಲವನ್ನರಿತರೂ, ಅರಿಯದೆ ಹೋದರು; ಎಲ್ಲೆಯೇ ಇಲ್ಲದ ಮನದಲ್ಲಿ ಉಳಿಯುವುದೊಂದೇ — ಅದೇ — ನಿರಾಸೆ

----------------------------------

ನೋಂದಣಿ ಐಡಿ : KPFS2-2058

0
Votes
83
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top