Submission 7012

ಕೈಗೂಡದ ಕನಸುಗಳಿಗೆ

ರಚನೆ : ರವಿತೇಜ ಜೆ ಎ

----------------------------------

ಕೈಗೂಡದ ಕನಸುಗಳಿಗೆ ಕೈ ಮುಗಿದು ಕೇಳುವೆನು ನೆನಪಾಗಿ ಕಾಡದಿರಿ ನನ್ನ ನತದೃಷ್ಟ ನಾನು ಹೆಚ್ಚೇನು ಕೇಳೇನು ಬಯಸುವೆನು ತುಸು ನೆಮ್ಮದಿಯನ್ನ ಕ್ಷಮೆ ಇರಲಿ ಭ್ರಮೆಗಳಿಗೆ ಭ್ರಮೆಗಳಿಂದ ಬೆಳೆದ ಭಾವನೆಗಳಿಗೆ ಭಾವನೆಗಳು ತಂದ ಕನಸುಗಳಿಗೆ ಆ ಕನಸುಗಳು ಕೈಗೂಡದೆ ತಂದ ನೋವುಗಳಿಗೆ ನೋವಿನ ನೆನಪುಗಳಿಗೆ ಕೈ ಮುಗಿದು ಕೇಳುವೆ ಕಾಡದಿರಿ ಹೀಗೆ ಪ್ರತಿ ಘಳಿಗೆ ಬದುಕಲು ಬಿಡಿ ನನ್ನ ತುಸು ನೆಮ್ಮದಿಯ ಜೊತೆಗೆ

----------------------------------

ನೋಂದಣಿ ಐಡಿ : KPFS2-2049

0
Votes
85
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top