ವರ್ಷ ಧಾರೆ
ರಚನೆ : ವರ್ಷ
----------------------------------
ಆಕಾಶದಿಂದ ಧರೆಗುರುಳಿತೊಂದು ಹನಿ ಸಂತಸದಿಂದ ನರ್ತಿಸಿತು ಅವನಿ ಹನಿ ಹನಿಯಲ್ಲೂ ಅಡಗಿತ್ತು ಬಾನಿನ ಸಂದೇಶ ಭೂಮಿಗೆ ನಾಜೂಕಾಗಿ ತಂದೊಡ್ಡಿತು ವರ್ಷ ಆಗಸಕಾದಂತಿತ್ತು ಭೂಮಿಯ ಸೇರುವ ವ್ಯಾಮೋಹ ಆಸೆತೀರದೆಂದು ತಿಳಿದು ಹೆಚ್ಚಿದಂತಿತ್ತು ವಿರಹ ತನ್ನ ಭಾವನೆಗಳ ಇಳೆಗೆ ತಲುಪಿಸಲು ಇಲ್ಲದಿದ್ದಾಗ ಮಾರ್ಗ ಮಳೆ ಬಂದು ಸುರಿಯಿತು ಬಾನು ಭುವಿಗಳ ನೆರವಿಗಾಗ ಮೂಡಿತು ಕಾಮನಬಿಲ್ಲಿನ ಬಣ್ಣದ ಚಿತ್ರ ಕಂಡು ನಸು ನಕ್ಕಿತು ಭೂಮಿ ಆಗಸದತ್ತ ಹೀಗೆ ತಲುಪಿತು ಭುವಿಗೆ ಬಾನಿನ ಪ್ರೀತಿಯ ಕರೆ ಬಾನು ಭೂಮಿಯ ಮಮತೆಗೆ ಪಾತ್ರವಾಯಿತು ವರ್ಷಧಾರೆ.
----------------------------------
ನೋಂದಣಿ ಐಡಿ : KPFS2-2050